ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ ಕೊರೊನಾ ಸೋಂಕು: ಖಚಿತಪಟ್ಟ ಮೂವರಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ದಾವಣಗೆರೆ ಏ.08-ಇಲ್ಲಿಯವರೆಗೆ ಭಾರತವೂ ಸೇರಿದಂತೆ 117 ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್ ಕೊರೊನಾ ವೈರಸ್ (covid-19)ನ್ನು 2020 ರ ಜನವರಿ 30 ರಂದು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು 2020 ರ ಮಾರ್ಚ್ 11 ರಂದು ಕೋವಿಡ್-19 ನ್ನು ಸರ್ವವ್ಯಾಪಿ ರೋಗ ಎಂದು ನಿರೂಪಿಸಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯು ರೋಗ ತಡೆಗಟ್ಟುವ ಕ್ರಮಗಳನ್ನು ಎಲ್ಲ ರೀತಿಯ ಸರ್ವೇಕ್ಷಣೆಯನ್ನು ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು ಬಲಪಡಿಸಿದೆ.
2020 ರ ಮಾರ್ಚ್ 04 ರಿಂದ ಇದುವರೆಗೆ 383 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, 28 ದಿನಗಳ ಅವಲೋಕನ ಅವಧಿಯನ್ನು 145 ಜನರು ಪೂರ್ಣಗೊಳಿಸಿದ್ದಾರೆ. ಹಾಗೂ 187 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 21 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 39 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗೂ ಇದುವರೆಗೂ 34 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ 10 ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ 17 ಜನ ತೆರಳಿರುತ್ತಾರೆ. ಕೊರೋನಾ ವೈರಸ್ ಪರೀಕ್ಷೆಗಾಗಿ 69 ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದ್ದು, 62 ಮಾದರಿಗಳು ನೆಗೆಟಿವ್ ಎಂದು ಫಲಿತಾಂಶ ಬಂದಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಖಚಿತಪಟ್ಟ ಮೂರು (03) ಪ್ರಕರಣಗಳ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ವಿಷಯಗಳು :
• ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಕೋವಿಡ್-19 ಕುರಿತು ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿಯನ್ನು ನೀಡಲಾಗುತ್ತಿದೆ ಮತ್ತು ತಮ್ಮ ವ್ಯಾಪ್ತಿಯಲ್ಲಿ ಬಂದಿರುವ ವಲಸಿಗರ ಆರೋಗ್ಯ ತಪಾಸಣೆಯನ್ನು ಮಾಡುತ್ತಿದ್ದಾರೆ.
• ಜಿಲ್ಲೆಯ 4 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 5 ಐಸೊಲೇಷನ್ ಬೆಡ್‍ಗಳನ್ನು ಸ್ಥಾಪಿಸಲಾಗಿದೆ ಹಾಗೂ ಜ್ವರದ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗಿದೆ.
• ಖಚಿತಪಟ್ಟ ಪ್ರಕರಣಗಳು ಬಂದಿರುವ 2 ಎಪಿಸೆಂಟರ್‍ನ ಕಂಟೈನ್‍ಮೆಂಟ್ ಝೋನ್‍ನಲ್ಲಿ ಈ ದಿನ 1193 ಮನೆಗಳಿಂದ 4796 ಜನರನ್ನು ಸಂದರ್ಶಿಸಿ ಫ್ಲೂ (IಐI) ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರುಗಳನ್ನೊಳಗೊಂಡ 28 ತಂಡಗಳಿಂದ ನಡೆಸಯಿತ್ತು. ಈ ದಿನ ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಇರುವುದಿಲ್ಲ. ಸಂಚಿತ ಮನೆಗಳು-11008 ಜನಸಂಖ್ಯೆ 44139 ಲಕ್ಷಣಗಳು ಇರುವ ವ್ಯಕ್ತಿಗಳು 24, ಗುಣಮುಖರಾದವರು 24.
ಸಾರ್ವಜನಿಕರಿಗೆ ಮನವಿ: ಕೋವಿಡ್-19 ಪೀಡಿತ ಪ್ರದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು. ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಅಥವಾ 104 ಸಹಾಯವಾಣಿಗೆ ಕರೆ ಮಾಡುವುದು. ವೈಯುಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ ಸಚ್ಚಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು.
ಎಲ್ಲಾ ರೀತಿಯ ಮಾರ್ಗಸೂಚಿಗಳು ಮತ್ತು ಸಲಹೆಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಜಾಲತಾಣ https://karunadu.karnataka.gov.in /hfw/kannada/pages/nCov-iec.aspx ದಲ್ಲಿ ಲಭ್ಯವಿದ್ದು, ಇಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

TrueMedia

YouTube and Website Channel

You may also like...