ಪದವಿ ತರಗತಿಗಳಿಗೆ ಮೇ ಎರಡನೇ ವಾರದಲ್ಲಿ ಪರೀಕ್ಷೆ ನಡೆಸಲು ಕಾರ್ಯಪಡೆ ಸಮಿತಿ ಶಿಫಾರಸ್ಸು..!

ಅಂತಿಮ ಸೆಮಿಸ್ಟರ್ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಿ ಎಂದು ಕಾರ್ಯಪಡೆ ಸಮಿತಿ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಅವರಿಗೆ ಸಲಹೆ ನೀಡಿದೆ.ಇಲ್ಲಿಯವರೆಗೆ ನಿಗದಿತ ಶೈಕ್ಷಣಿಕ ವರ್ಷದ ಪ್ರಕಾರ ಪದವಿ ತರಗತಿಗಳಿಗೆ ಏಪ್ರಿಲ್ 27ರಿಂದ ಮತ್ತು ಸ್ನಾತಕೋತ್ತರ ಪದವಿಗಳಿಗೆ ಮೇ 8ರಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ ಪರೀಕ್ಷೆಗಳು ಆರಂಭವಾಗುತ್ತವೆ. ಈ ವರ್ಷ ಕೋವಿಡ್-19ನಿಂದ ಲಾಕ್ ಡೌನ್ ನಿಂದಾಗಿ ಎಲ್ಲಾ ವಲಯಗಳ ಕಾರ್ಯಚಟುವಟಿಕೆ ಮೇಲೆ ಬಿಸಿ ತಟ್ಟಿದ್ದು ಇನ್ನು ಮುಂದೆ ಪರೀಕ್ಷೆಗಳನ್ನು ಹೇಗೆ ನಡೆಸುವುದು ಎಂಬ ಬಗ್ಗೆ ಪರಿಶೀಲನೆ ನಡೆಸಲು ಯುಜಿಸಿ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಯುಜಿಸಿಯ ಶಿಫಾರಸುಗಳನ್ನು ನೋಡಿಕೊಂಡು ಅದರಂತೆ ಅಳವಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯಕಾರಿ ನಿರ್ದೇಶಕ ಎಸ್ ಎ ಕೊರಿ ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ತರಗತಿಗಳು ಪುನರಾರಂಭಗೊಂಡ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಸಮಾಲೋಚನೆ ನಡೆಸಬೇಕು ಎಂದು ಸಹ ಸಮಿತಿ ಸಚಿವರಿಗೆ ಶಿಫಾರಸು ಮಾಡಿದೆ. ಲಾಕ್ ಡೌನ್ ಮುಗಿದರೆ ಮೇ ಎರಡನೇ ವಾರದಲ್ಲಿ ಪರೀಕ್ಷೆ ನಡೆಸುವಂತೆ ಸಮಿತಿ ಸಚಿವರಿಗೆ ಸೂಚಿಸಿದೆ. ರಾಜ್ಯದಲ್ಲಿರುವ 32 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳೊಂದಿಗೆ ಸಂವಾದ ನಡೆಸಿದ ಸಮಿತಿ ಸದಸ್ಯರು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿತು.

TrueMedia

YouTube and Website Channel

You may also like...