ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹೋಟೆಲ್ ತೆರೆಯಲು ಅನುಮತಿ

ದಾವಣಗೆರೆ, ಏ.08-ಕೋವಿಡ್-19 ಸಾಂಕ್ರಾಮಿಕ ರೋಗವು ತ್ರೀವ್ರತರವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಸರ್ಕಾರವು ಹಲವು ರೀತಿಯ ಪ್ರಯತ್ನಗಳಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಶ್ಯಕ ಸಾಮಗ್ರಿಗಳನ್ನು ತಲುಪಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಚÀಲನೆಗೆ ಅವಕಾಶ ನೀಡಲಾಗಿರುತ್ತದೆ. ವಾಹನ ಚಾಲಕರಿಗೆ ಮತ್ತು ಅವರ ಸಹಾಯಕರಿಗೆÉ ಊಟೋಪಚಾರಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಈ ಕೆಳಕಂಡ ಹೋಟೆಲ್ ಮತ್ತು ಡಾಬಾಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಗ್ರೀನ್ ಪಾಯಿಂಟ್ ಪಂಜಾಬಿ ಡಾಬಾ, ಕುಂದುವಾಡ ಹತ್ತಿರ ದಾವಣಗೆರೆ ಮಾಲೀಕರು ಅಬ್ದುಲ್ ರಜಾಕ್ ದೂ.ಸಂ. 9844027001. ಶಾಂತಿಸಾಗರ ಡಾಬಾ ಪಂಚಮಸಾಲಿ ಮಠದ ಹತ್ತಿರ ದಾವಣಗೆರೆ ಮಾಲೀಕರು ರುದ್ರೇಶ್. ಹೆಚ್.ವಿ ದೂ.ಸಂ. 9945134846. ಬಸವೇಶ್ವರ ಹೋಟೆಲ್ ಅಣ್ಣಾಪುರ ಗ್ರಾಮ ದಾವಣಗೆರೆ ಮಾಲೀಕರು ರೇವಣ್ಣಸಿದ್ದಪ್ಪ ದೂ.ಸಂ. 886110388. ಪೃಥ್ವಿ ಡಾಬಾ ಬಾಡಾ ಗ್ರಾಮ ದಾವಣಗೆರೆ ಮಾಲೀಕರು ರೇವಣ್ಣಸಿದ್ದಪ್ಪ ಜೆ.ಜೆ ದೂ.ಸಂ 7619258791. ಸಂಜನ ಹೋಟೆಲ್ ಗರಗ ಕ್ರಾಸ್, ಚನ್ನಗಿರಿ ಮಾಲೀಕರು ಹೆಚ್.ವಿ ಮಂಜುನಾಥ ದೂ.ಸಂ. 9632457981. ಮಲ್ನಾಡುಸಿರಿ ಫ್ಯಾಮಿಲಿ ರೆಸ್ಟೋರೆಂಟ್ ದುದುರಕಟ್ಟೆ, ಚನ್ನಗಿರಿ ಮಾಲೀಕರು ರಾಹುಲ್.ಜೆ ದೂ.ಸಂ. 9380100677. ಬಿಂದಾಸ್ ಡಾಬಾ ಆನಗೋಡು ಹತ್ತಿರ. ದಾವಣಗೆರೆ ಮಾಲೀಕರು ಮಹಮ್ಮದ್ ರಫೀಕ್ ದೂ.ಸಂ. 8431664377. ಕಿರಣ್ ರೆಡ್ಡಿ ಫ್ಯಾಮಿಲಿ ರೆಸ್ಟೋರೆಂಟ್ ದೊಣ್ಣೇಹಳ್ಳಿ ಹತ್ತಿರ ಜಗಳೂರು ಮಾಲೀಕರು ಕಿರಣ್ ರೆಡ್ಡಿ ದೂ.ಸಂ. 9686780638. ಸಾಗರ ಸಕಾರ ಡಾಬಾ ಹನಗವಾಡಿ ಕ್ರಾಸ್ ಹತ್ತಿರ ಹರಿಹರ ಮಾಲೀಕರು ಸೈಯದ್ ಅಲ್ತಾಫ್ ದೂ.ಸಂ. 8618653670. ಅಮೃತ ಹೋಟೆಲ್ ಹದಡಿ ಗ್ರಾಮ, ದಾವಣಗೆರೆ ಮಾಲೀಕರು ಸಿ.ಹೆಚ್ ನಾಗರಾಜ್, ಮರಿಯಮ್ಮನದೇವಿ ಖಾನವಳಿ ಹಿರೇಮಳಲಿ ರಸ್ತೆ ನಲ್ಲೂರು ಮಾಲೀಕರು ಎನ್.ಪರಮೇಶ್ವರಪ್ಪ ದೂ.ಸಂ. 9481508631. ಬಸವೇಶ್ವರ ಹೋಟೆಲ್ ತ್ಯಾವಣಿಗೆ, ಚನ್ನಗಿರಿ ಮಾಲೀಕರು ಜಿ.ಶಿವಕುಮಾರ್ ದೂ.ಸಂ.9972036741. ಸಂತೋಷ್ ಫ್ಯಾಮಿಲಿ ರೆಸ್ಟೋರೆಂಟ್ ದೇವನಾಯಕನಹಳ್ಳಿ, ಹೊನ್ನಾಳಿ ಮಾಲೀಕರು ಎ.ಎನ್.ಸಂತೋಷ್ ದೂ.ಸಂ.9481781717. ಹೊಯ್ಸಳ ಡಾಬಾ ಸುರಹೊನ್ನೆ ನ್ಯಾಮತಿ ಮಾಲೀಕರು ಸಂಗಮೇಶ್ ದೂ.ಸಂ. 9591814339. ಈಟರ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಗೊಲ್ಲರಹಳ್ಳಿ ದಾವಣಗೆರೆ ಮಾಲೀಕರು ಅವಿನಾಶ್ ದೂ.ಸಂ.9986935295. ಈ ಹೋಟೆಲ್‍ಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿದೆ. ಹೋಟೆಲ್ ಮಾಲೀಕರಿಗೆ ಕೆಲ ಷರತ್ತುಗಳು ಮತ್ತು ನಿಯಮಗಳನ್ನು ಸೂಚಿಸಲಾಗಿದೆ. ಗ್ರಾಹಕರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದು, ಪರಿಶುದ್ದತೆ, ನೈರ್ಮಲ್ಯ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮತ್ತು ಸ್ತಾನಿಟೈಜರ್ ಬಳಕೆ ಕಡ್ಡಾಯವಾಗಿರುತ್ತದೆ ಮತ್ತು ಕೆಲಸ ನಿರ್ವಹಿಸುವವರೆಲ್ಲರು ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಕ್ಕದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳತಕ್ಕದ್ದು. ಮಾಲೀಕರುಗಳು ಸೇರಿದಂತೆ ಕೆಲಸಗಾರರಿಗೆ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕು. ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ ಸ್ಯಾನಿಟೈಸರ್/ಸೋಪ್ ವ್ಯವಸ್ಯೆ ಮಾಡಬೇಕು. ಊಟ/ಉಪಾಹಾರಗಳನ್ನು ಗ್ರಾಹಕರಿಗೆ ಪಾರ್ಸಲ್ ಮೂಲಕ ಮಾತ್ರ ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ. ಕುಳಿತು ತಿನ್ನುವುದಕ್ಕೆ ಅವಕಾಶವಿರುವುದಿಲ್ಲ. ಈ ಷರತ್ತುಗಳನ್ನು ಉಲ್ಲಂಘಿಸುವವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರವರೆಗೆ ಕಾನೂನುಗಳನ್ವಯ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

TrueMedia

YouTube and Website Channel

You may also like...