ಶ್ರೀ ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಮತ್ತು ಮಾರ್ಬಲ್ಸ್ ವತಿಯಿಂದ ನಿರಾಶ್ರಿತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ.

ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಮತ್ತು ಮಾರ್ಬಲ್ಸ್ ವತಿಯಿಂದ ನಿರಾಶ್ರಿತರಿಗೆ ಅಕ್ಕಿ, ಬೇಳೆ, ಬೆಲ್ಲ, ಸೋಪು, ಹೆಸರುಕಾಳು, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಶಿವಗಂಗಾ ನೀರಿನ ಬಾಟಲಿ ಹೊಂದಿರುವ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲಾಯಿತು. ಕೊರೋನಾ ವೈರಸ್ ಮಹಾಮಾರಿಯಿಂದ ಇಡೀ ವಿಶ್ವದಾದ್ಯಂತ ಲಾಕ್ ಡೌನ್ ಆಗಿ ಕೋಟ್ಯಾಂತರ ಜನರಿಗೆ ತೊಂದರೆ ಉಂಟಾಗಿದ್ದು, ನಿರಾಶ್ರಿತರಾದ ನಾಗರೀಕರಿಗೆ ಸ್ವಲ್ಪಮಟ್ಟಿಗಾದರು ಸಹಾಯ ಮಾಡುವ ಉದ್ದೇಶದಿಂದ ಈ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಗುತ್ತಿದೆ ಎಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಮತ್ತು ಮಾರ್ಬಲ್ಸ್‍ನ ಮಾಲೀಕರಾದ ಗೌಡ್ರ ಇಂದ್ರಪ್ಪನವರು ತಿಳಿಸಿದರು. ಆಹಾರ ಸಾಮಾಗ್ರಿಗಳ ಕಿಟ್‍ನ್ನು ನಿರಾಶ್ರಿತರಿಗೆ ವಿತರಿಸುವ ಜೊತೆಗೆ ನಮ್ಮ ಸಮೂಹದಿಂದ ದಾವಣಗೆರೆ, ಮತ್ತು ಚಿತ್ರದುರ್ಗ ನಗರಗಳಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಮತ್ತು ಮಾರ್ಬಲ್ಸ್ ಶಾಖೆಗಳಿದ್ದು, ಈ ಎರಡು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ತಲಾ 1 ಲಕ್ಷ ರೂಗಳಂತೆ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಚೆಕ್‍ನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್ ಮತ್ತು ಮಾರ್ಬಲ್ಸ್‍ನ ಮಹಾದೇವ್ ಸಿ. ಹಂಪನೂರು, ಅಜ್ಜಪ್ಪ ಬಿ.ಆರ್. ಮತ್ತು ಗೌಡ್ರ ಇಂದ್ರಪ್ಪನವರ ಪುತ್ರ ಯತಿನ್ ಗೌಡ್ರ ಉಪಸ್ಥಿತರಿದ್ದರು.

TrueMedia

YouTube and Website Channel

You may also like...