ಹುಸೇನಿಯಾ ಫೌಂಡೇಷನ್‍ನ ವತಿಯಿಂದ 1 ಸಾವಿರ ನಾಗರೀಕರಿಗೆ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಣೆಗೆ ಶಾಸಕ ಡಾ.ಎಸ್ಸೆಸ್ ಚಾಲನೆ

ದಾವಣಗೆರೆ: ನಗರದ ವಿಠ್ಠಲ್ ಮಂದಿರ ರಸ್ತೆಯಲ್ಲಿ ಹುಸೇನಿಯಾ ಫೌಂಡೇಷನ್‍ನ ವತಿಯಿಂದ 1 ಸಾವಿರ ಅವಶ್ಯಕವಿರುವ ನಾಗರೀಕರಿಗೆ ಅಕ್ಕಿ, ರವೆ, ಅವಲಕ್ಕಿ, ಬೇಳೆ, ಅಡುಗೆ ಎಣ್ಣೆಯ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಡಾ|| ಶಾಮನೂರ ಶಿವಶಂಕರಪ್ಪನವರು ಚಾಲನೆ ನೀಡಿದರು. ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಜನರು ಜನಕ್ಕೆ ಸಹಾಯ ಮಾಡಿ ಯಾರೇ ತೊಂದರೆ ಅನುಭವಿಸಿದರು ಕೂಡಾ ಅವರ ಕಷ್ಟಕ್ಕೆ ಸ್ಥಿತಿವಂತರು ಮುಂದೆ ಬರಬೇಕು ಎಂದು ಇದೇ ವೇಳೆ ಕರೆ ನೀಡಿದರು. ಕೊರೋನಾ ವಾರಿಯರ್ಸ್‍ಗಳಾದ ಪೊಲೀಸರು, ಪತ್ರಕರ್ತರು ಮತ್ತು ಪೌರಕಾರ್ಮಿಕರಿಗೆ ಶಾಸಕ ಡಾ|| ಶಾಮನೂರ ಶಿವಶಂಕರಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಹುಸೇನಿಯಾ ಫೌಂಡೇಷನ್‍ನ ಅಧ್ಯಕ್ಷರಾದ ಚಮನ್‍ಸಾಬ್ ಸನ್ಮಾನ ಮಾಡಿದರು. ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದಲೂ ವಿರಮಿಸದೇ ನಗರ ಸ್ವಚ್ಚತೆಯಲ್ಲಿ ತೊಡಗಿರುವ ಪೊಲೀಸರು, ಪತ್ರಕರ್ತರು ಮತ್ತು ಪೌರ ಕಾರ್ಮಿಕರಿಗೆ ಶಾಲು ಹೊದಿಸಿ ಹಣ್ಣು ವಿತರಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಕಕ್ಕರಗೊಳ್ಳ ಜಾಮೀಯಾ ಮಸೀದಿ ಪರವಾಗಿ ಮುಖ್ಯಮಂತ್ರಿಗಳ ಕೊವಿಡ್-19 ಪರಿಹಾರ ನಿಧಿಗೆ 25 ಸಾವಿರ ದೇಣಿಗೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಹುಸೇನಿಯಾ ಫೌಂಡೇಷನ್‍ನ ಉಪಾಧ್ಯಕ್ಷರಾದ ಬಾಷಾಸಾಬ್, ಕಾರ್ಯದರ್ಶಿ ಜಬೀವುಲ್ಲಾ, ನಿರ್ದೇಶಕರುಗಳಾದ ರಹಮತ್ತುಲ್ಲಾ, ಅಹ್ಮದ್ ರಜಾ, ಮಹ್ಮದ್ ಜುಬೇರ್, ಕೆ.ಪಿ.ಸಿ.ಸಿ.ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಮೇಯರ್ ಬಿ.ಜಿ.ಅಜಯ್ ಕುಮಾರ್, ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಎ.ಬಿ.ರಹೀಂ, ಕಬೀರ್, ಮುಖಂಡರುಗಳಾದ ಗಣೇಶ್ ಹುಲ್ಮನಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಹರೀಶ್ ಕೆ.ಎಲ್., ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು ಎನ್., ಸಿಮೇಎಣ್ಣೆ ಪರಮೇಶ್ ಮತ್ತಿತರರಿದ್ದರು

TrueMedia

YouTube and Website Channel

You may also like...